ದಿಗಂತ್ ಮಂಚಾಲೆ , ಅಥವಾ ದಿಗಂತ್ , ಕನ್ನಡ ಚಲನಚಿತ್ರ ನಟ ಹಾಗು ರೂಪದರ್ಶಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ. == ಆರಂಭಿಕ ಜೀವನ == ಇವರ ಹುಟ್ಟೂರು ಕರ್ನಾಟಕ ರಾಜ್ಯದ ಸಾಗರ. ಇವರು ವಾಣಿಜ್ಯ ಕ್ಷೇತ್ರದಲ್ಲಿ ಉನ್ನತ ಪದವಿ ಪಡೆದಿದ್ದಾರೆ. ಇವರ ಶಾಲಾ ವಿದ್ಯಾಭ್ಯಾಸ ತೀರ್ಥಹಳ್ಳಿಯಲ್ಲಿ ನಡೆಯಿತು, ಪಿ ಯು ಸಿ ಯನ್ನು ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿಯಲ್ಲಿ ಮುಗಿಸಿದರು. ದಿಗಂತನ ತಂದೆ ಕೃಷ್ಣಮೂರ್ತಿ ಅವರು ಪದವಿ ಕಾಲೇಜಿನ ಪ್ರಾಧ್ಯಾಪಕ. ದಿಗಂತ್ ಅವರಿಗೆ ಒಬ್ಬ ಸಹೋದರನಿದ್ದಾನೆ. == ವೃತ್ತಿಜೀವನ == ಇವರು ಕನ್ನಡ ಚಲನಚಿತ್ರೋದ್ಯಮಕ್ಕೆ ಪರಿಚಯಗೊಂಡಿದ್ದು ಮಿಸ್ ಕ್ಯಾಲಿಫೋರ್ನಿಯಾ ಇಂದ. ಅನಂತರದ ಚಲನಚಿತ್ರ ಎಸ್ ಎಂ ಎಸ್ ೬೨೬೦. ಆದರೆ ಇವರನ್ನು ಜನಪ್ರಿಯ ನಟನಾಗಿಸಿದ್ದು ಮುಂಗಾರು ಮಳೆ. ನಂತರ ಗಾಳಿಪಟ ಚಿತ್ರದಲ್ಲಿ ಕೂಡ ನಟಿಸಿದರು. 'ಗಾಳಿಪಟ'ದ ಯಶಸ್ಸಿನ ನಂತರ ದಿಗಂತ್ ಮುಖ್ಯ ಭೂಮಿಕೆಯಲ್ಲಿ ೫ ಚಲನಚಿತ್ರದಲ್ಲಿ ಕಂಡುಬಂದರು. ಮನಸಾರೆ ಇವರು ಏಕನಾಯಕನಾಗಿ ನಟಿಸಿದ ಮೊದಲ ಚಲನಚಿತ್ರ.. == ಚಲನಚಿತ್ರಗಳು == == ಉಲ್ಲೇಖಗಳು ==